Wednesday, September 12, 2007

AYURVEDIC PLATTER!!

I became aware of the above platter for the first time when we(me and KK) had been to a German Vegetarian restaurant in Munich. We were very amazed to see this in the menu card and even more amazed to see what the platter contains. It has samosa, chutney, rice with curry, falafal and papad. I didn't find any connection between Ayurveda and the listed items. Actually these are not considered healthy eats. Two days earlier we had been to another vegetarian restaurant, where again the same items under"Ayurvedic Platter". But anyway the name has done the trick and i could see many people having that.
So we can't say what's in a name. In this competitive world, everything is in a NAME.

Friday, September 7, 2007

ಭೋ(ಬೋ)ರ್‌ಗರೆಯುವ ಮಳೆ

ಇಲ್ಲಿ(ಮ್ಯುನಿಕ್,ಜರ್ಮನಿ) ಸುಮಾರು ನಾಲ್ಕೈದು ದಿನದಿಂದ ಒಂದೇ ಸಮನೆ
ಮಳೆ ನಿಜವಾಗಿಯೂ ಬೋರ್‌-ಗರೆಯುತ್ತಿದೆ. ಇಲ್ಲಿ ಸ್ವಲ್ಪ ಹೊತ್ತು ಮಳೆ
ಜೋರಾಗಿ ಸುರಿದರೂ ಸಾಕು ಚಳಿ ಹುಟ್ಟುತ್ತದೆ. ಆದ್ರಿಂದ ಕಿಟಕಿ ತೆಗೆಯುವ
ಪ್ರಶ್ನೆಯೇ ಇಲ್ಲ. ಮೊದಲೇ ಇಲ್ಲಿ ಜನಸಂಚಾರ ಕಡಿಮೆ,ಶಬ್ಧ ಕೇಳೋದು
ಆಗೊಮ್ಮೆ-ಈಗೊಮ್ಮೆ. ಇನ್ನು ಕಿಟಕಿ ಹಚ್ಚಿಬಿಟ್ಟ್ರಂತೂ ನಿಶ್ಶಬ್ಧ, ಮಳೇನ
ನೋಡಬಹುದು ಅಷ್ಟೆ, ಅನುಭವಿಸೋಕ್ಕೆ ಆಗಲ್ಲ.

ಮೈಸೂರಿನಲ್ಲಿ ಮಳೆ ಶುರುವಾಯ್ತು ಅಂದ್ರೆ ಜೊತೆಗೆ ಮಣ್ಣಿನ ವಾಸನೆ.
ಆಚೆ ಕಟ್ಟೆ ಮೆಲೆ ಕೂತ್ಕೊಂಡು ಮಳೇನ ನೋಡೋದೇ ಒಂದು ಮಜಾ.
ಚಿಕ್ಕವರಾಗಿದ್ದಾಗ್ಲಂತೂ ಮಳೇಲಿ ನೆನೆಯಕ್ಕೆ ಕಾರಣ ಹುಡುಕುತಿದ್ವಿ.
ಇದರ ಜೊತೆಗೆ ಅಮ್ಮ ಮಾಡಿದ ಪಕೋಡ ಇದ್ರಂತೂ ಆಹಾ ಸ್ವರ್ಗ.
ಅಥವಾ ಚುರುಮುರಿ,ಬೊಂಡಾ,ವಡೆ ಆದ್ರೂ ಆಯ್ತು.

ಇಲ್ಲಿ ಹೊರಗೆ ಹೋಗ್ಬೇಕು ಅಂದ್ರೆ ಎರಡು,ಮೂರು ಪದರ ಬೆಚ್ಚಗಿರೋ
ಬಟ್ಟೆ ಹಾಕ್ಕೊಂಡು, ತಕ್ಕ ಶೂಸ್ ಹಾಕ್ಕೊಂಡು,ಜೊತೆಗೆ ಚತ್ರಿ
ಹಿಡ್ಕೊಂಡು ಹೊರಡಬೇಕು. ಮ್‍ಮ್.. ಬೋಂಡಾ,ವಡೆ... ಸಿಗುತ್ತೆ
ಅನ್ನೋ ಆಮಿಷ ಇದ್ದಿದ್ರೆ ತಯಾರಾಗಿ ಹೊರಡೋದ್ರಲ್ಲಿ ಹುಮ್ಮಸ್ಸಿರುತಿತ್ತು
ಉಫ್.. ಎಲ್ಲಾ ನಾವೇ ಮಾಡ್ಕೊಂಡು ತಿನ್ಬೇಕು.

ಹಾಗಾಗಿ ಸೂರ್ಯ ಯಾವಗ ನಿದ್ದೆಯಿಂದೆದ್ದು ಹೊರಗೆ ಬರ್ತಾನೋ ಅಂತ
ಕಾಯೋ ಹಂಗಾಗಿದೆ

Tuesday, September 4, 2007

ಕನಸೋ ಇದು ಹುಚ್ಚೋ

ನನ್ನ ಹತ್ತಿರದವರಿಗೆ ಸಾಮಾನ್ಯವಾಗಿ ನನಗೆ ಬೀಳುವ ಹುಚ್ಚು ಕನಸುಗಳ ಬಗ್ಗೆ ತಿಳಿದೇ ಇರುತ್ತದೆ.
ಅದರಲ್ಲೂ ನನಗೆ ತುಂಬ ಪ್ರಿಯವಾದ ಹಾಗೂ ಎಂದೂ ಮರೆಯಲಾಗದ ಎರಡು ಕನಸುಗಳ ಬಗ್ಗೆ ಇಲ್ಲಿ ಬರೆಯಿತ್ತಿದ್ದೇನೆ.

೧. ಒಮ್ಮೆ ಕನಸಿನಲ್ಲಿ ನಮ್ಮಮ್ಮ ಲಾರಿ ಓಡಿಸುತ್ತಿದ್ದ ಹಾಗೆ ಬಿತ್ತು. ನಮ್ಮಮ್ಮ ಎಂದೂ ಯಾವ ಗಾಡಿನೂ ಓಡಿಸಿದವರಲ್ಲ.ಅವರಿಗೆ ಈ ಕನಸಿನ ಬಗ್ಗೆ ಹೇಳಿದಾಗ ಅವರ ಪ್ರತಿಕ್ರಿಯೆ, ಕನಸಲ್ಲಾದ್ರೂ ಒಳ್ಳೆ ಕಾರ್ ಓಡಿಸ್ತಿರೋ ತರಹ ನೀನು ಕಾಣಬಾರದಿತ್ತ ಎಂದು ನನ್ನ ಹಾಸ್ಯ ಮಾಡಿದರು.
೨. ಇನ್ನೊಮ್ಮೆ ನನ್ನ ಕನಸಿನಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರನ್ನು ಭೇಟಿ ಮಾಡಿದ್ದೆ. ಅವರು ನನ್ನ ಬೆನ್ನು ತಟ್ಟಿ, ನಮ್ಮಮ್ಮನ ಬಳಿ ಹೋಗಿ, ನೀವು ತುಂಬಾ ಅದೃಷ್ಟವಂತರು ಇಂಥಾ ಒಳ್ಳೆಯ ಮಗಳನ್ನು ಪಡೆಯಲು ಎಂದು ಹೇಳಿದರು.(ಆಮೇಲೆ ಕನಸು ಅಂತ ಗೊತ್ತಾದ್ರೂ, ಕನಸಲ್ಲಾದ್ರೂ ಇಂಥಾ ಒಳ್ಳೆ ಕಾಂಪ್ಲಿಮೆಂಟ್ ಸಿಕ್ತಲ್ಲ ಅಂಥ ಖುಶಿಯಾಯ್ತು)
ಹೀಗೆ ನೂರಾರು ಚಿತ್ರವಿಚಿತ್ರ ಕನಸುಗಳು ಬಿದ್ದಿವೆ,ಬೀಳುತ್ತಲೇ ಇರುತ್ತವೆ.

ನಾನೆಲ್ಲೋ ಓದಿದ್ದೆ,ಮನುಷ್ಯನಿಗೆ ಬೀಳುವ ಕನಸುಗಳನ್ನು ಅವಲೋಕಿಸಿ,ಅವನ ಸ್ವಭಾವದ ಬಗ್ಗೆ ಅರಿಯಬಹುದು ಅಂಥ. ಆಗ ನಾನು ಯೋಚಿಸಿದೆ,ಸಧ್ಯ ನನ್ನ ಕನಸುಗಳನ್ನು ಯಾರೂ ಅವಲೋಕಿಸಿಲ್ಲ.
ಹಾಗಿದ್ದರೆ ಖಂಡಿತಾ ನನಗೆ ಹುಚ್ಚು ಎಂದೇ ಹೇಳುತ್ತಿದ್ದರು
.