ಇಲ್ಲಿ(ಮ್ಯುನಿಕ್,ಜರ್ಮನಿ) ಸುಮಾರು ನಾಲ್ಕೈದು ದಿನದಿಂದ ಒಂದೇ ಸಮನೆ
ಮಳೆ ನಿಜವಾಗಿಯೂ ಬೋರ್-ಗರೆಯುತ್ತಿದೆ. ಇಲ್ಲಿ ಸ್ವಲ್ಪ ಹೊತ್ತು ಮಳೆ
ಜೋರಾಗಿ ಸುರಿದರೂ ಸಾಕು ಚಳಿ ಹುಟ್ಟುತ್ತದೆ. ಆದ್ರಿಂದ ಕಿಟಕಿ ತೆಗೆಯುವ
ಪ್ರಶ್ನೆಯೇ ಇಲ್ಲ. ಮೊದಲೇ ಇಲ್ಲಿ ಜನಸಂಚಾರ ಕಡಿಮೆ,ಶಬ್ಧ ಕೇಳೋದು
ಆಗೊಮ್ಮೆ-ಈಗೊಮ್ಮೆ. ಇನ್ನು ಕಿಟಕಿ ಹಚ್ಚಿಬಿಟ್ಟ್ರಂತೂ ನಿಶ್ಶಬ್ಧ, ಮಳೇನ
ನೋಡಬಹುದು ಅಷ್ಟೆ, ಅನುಭವಿಸೋಕ್ಕೆ ಆಗಲ್ಲ.
ಮೈಸೂರಿನಲ್ಲಿ ಮಳೆ ಶುರುವಾಯ್ತು ಅಂದ್ರೆ ಜೊತೆಗೆ ಮಣ್ಣಿನ ವಾಸನೆ.

ಆಚೆ ಕಟ್ಟೆ ಮೆಲೆ ಕೂತ್ಕೊಂಡು ಮಳೇನ ನೋಡೋದೇ ಒಂದು ಮಜಾ.
ಚಿಕ್ಕವರಾಗಿದ್ದಾಗ್ಲಂತೂ ಮಳೇಲಿ ನೆನೆಯಕ್ಕೆ ಕಾರಣ ಹುಡುಕುತಿದ್ವಿ.
ಇದರ ಜೊತೆಗೆ ಅಮ್ಮ ಮಾಡಿದ ಪಕೋಡ ಇದ್ರಂತೂ ಆಹಾ ಸ್ವರ್ಗ.
ಅಥವಾ ಚುರುಮುರಿ,ಬೊಂಡಾ,ವಡೆ ಆದ್ರೂ ಆಯ್ತು.
ಇಲ್ಲಿ ಹೊರಗೆ ಹೋಗ್ಬೇಕು ಅಂದ್ರೆ ಎರಡು,ಮೂರು ಪದರ ಬೆಚ್ಚಗಿರೋ
ಬಟ್ಟೆ ಹಾಕ್ಕೊಂಡು, ತಕ್ಕ ಶೂಸ್ ಹಾಕ್ಕೊಂಡು,ಜೊತೆಗೆ ಚತ್ರಿ
ಹಿಡ್ಕೊಂಡು ಹೊರಡಬೇಕು. ಮ್‍ಮ್.. ಬೋಂಡಾ,ವಡೆ... ಸಿಗುತ್ತೆ
ಅನ್ನೋ ಆಮಿಷ ಇದ್ದಿದ್ರೆ ತಯಾರಾಗಿ ಹೊರಡೋದ್ರಲ್ಲಿ ಹುಮ್ಮಸ್ಸಿರುತಿತ್ತು
ಉಫ್.. ಎಲ್ಲಾ ನಾವೇ ಮಾಡ್ಕೊಂಡು ತಿನ್ಬೇಕು.
ಹಾಗಾಗಿ ಸೂರ್ಯ ಯಾವಗ ನಿದ್ದೆಯಿಂದೆದ್ದು ಹೊರಗೆ ಬರ್ತಾನೋ ಅಂತ
ಹಾಗಾಗಿ ಸೂರ್ಯ ಯಾವಗ ನಿದ್ದೆಯಿಂದೆದ್ದು ಹೊರಗೆ ಬರ್ತಾನೋ ಅಂತ
ಕಾಯೋ ಹಂಗಾಗಿದೆ
No comments:
Post a Comment