Monday, September 15, 2008

ಸೈಕಲ್

ಈ ವಿಷಯದ ಬಗ್ಗೆ ಆಸಕ್ತಿ ನನಗೆ "ಮ್ಯುನಿಕ್(ಜರ್ಮನಿ)"‍ಗೆ ಬಂದ ನಂತರ ಶುರುವಾಗಿದ್ದು. ಇಲ್ಲಿಯವರ ಸೈಕಲ್ ಪ್ರೇಮ ಮೊದಮೊದಲು ನನಗೆ ವಿಚಿತ್ರ ಅನ್ನಿಸಿತ್ತು. ದಿನನಿತ್ಯದ ಚಟುವಟಿಕೆಗಳಿಗಲ್ಲದೆ ವಾರಾಂತ್ಯದಲ್ಲಿ ಸಂಸಾರ ಸಮೇತ ವಿಹರಿಸಲು ಕೂಡ ಇದು ಇಲ್ಲಿಯವರಿಗೆ ಒಂದು ಒಳ್ಳೆಯ ಸಾಧನ. ವರ್ಷದಲ್ಲಿ ೭೦% ಚಳಿ ಅಥವಾ ಮಳೆ ಇರುವ ಇಲ್ಲಿ ಬೇಸಿಗೆ ದಿನಗಳು ಒಂದು luxury. ಬಿಸಿಲಿದ್ದ ದಿನಗಳಲ್ಲಿ "ಬೈಕಿಂಗ್"(ಇಲ್ಲಿಯವರ ಭಾಷೆಯಲ್ಲಿ ಸೈಕಲ್ ಸವಾರಿ) ಮಾಡುವುದೇ ಒಂದು ಹೆಮ್ಮೆಯ ವಿಷಯ. ಹೀಗೇ ಎಲ್ಲಾ ವಯಸ್ಸಿನವರು ನಾನಾ ತರಹದ ಸೈಕಲ್ ಮೇಲೆ ಸವಾರಿ ಮಾಡುವುದನ್ನು ನೋಡನೋಡುತ್ತ ನನಗೂ ಸೈಕಲ್ ಓಡಿಸಬೇಕೆಂಬ ಆಸೆ ಬರತೊಡಗಿತು. ಸುಮಾರು ತಿಂಗಳ ಹಿಂದೆ ನನ್ನ ಜರ್ಮನ್ ಸ್ನೇಹಿತರೊಬ್ಬರ ಸೈಕಲ್ ಹೊಡೆದಿದ್ದೆ. ಸೈಕಲ್ ಸೀಟು ಅವರಿಗೆ ತಕ್ಕಂತೆ ಎತ್ತರದಲ್ಲಿತ್ತು. ಸುಮಾರು ವರ್ಷಗಳಿಂದ ದ್ವಿಚಕ್ರ ವಾಹನದ ಸೀಟು ಮೇಲೆ ಕೂತು "self starter" ಉಪಯೋಗಿಸಿ ಗಾಡಿ ಚಲಾಯಿಸಿ ಅಭ್ಯಾಸವಾಗಿದ್ದ ನನಗೆ ಆ ಉದ್ದದ ಸೈಕಲ್ ಮೇಲೆ ಹತ್ತಲು ತೊಂದರೆಯಾಗುತ್ತಿತ್ತು. ಆದ್ದರಿಂದ ಇಲ್ಲಿ ಬೇಸಿಗೆ ಶುರುವಾದಾಗಲಿಂದ ನನ್ನ ಎತ್ತರಕ್ಕೆ ಸರಿಯಾದ ಒಂದು ಸೈಕಲ್ ಕೊಂಡುಕೊಳ್ಳಬೇಕೆಂಬ ಆಸೆ ಇತ್ತು . ಅದು ಹತ್ತು ದಿನಗಳ ಹಿಂದೆ ಪೂರೈಸಿತು. ಮೊದಲ ದಿನ ಸೈಕಲ್ ತುಳಿದಾಗ ಆತಂಕ,ಹುಮ್ಮಸ್ಸು ಎಲ್ಲಾ ಇತ್ತು. ಜೊತೆಗೆ ಕಾಲಿನ ಕೆಲವು muscles ತಮ್ಮ ಇರುವಿಕೆಯನ್ನು ತೋರಿಸಿತು. ಆದರೂ ಹೈಸ್ಕೂಲ್‍ನ ನಂತರ ಮೊದಲ ಬಾರಿಗೆ ಮಾಡಿದ ಸೈಕಲ್ ಸವಾರಿ ಇಷ್ಟು ಖುಷಿ ಕೊಡುತ್ತೆ ಅಂದುಕೊಂಡಿರಲಿಲ್ಲ. ಆಗ ನನಗೆ ನೆನಪಾದದ್ದು ನಾನ್ನ ಮೊದಲ ಸೈಕಲ್, ಸ್ಕೂಲ್‍ಗೆ ಹೋಗಲು ನನ್ನ ಅಕ್ಕ ನನಗೆ ಕೊಡಿಸಿದ್ದು. ಆಗ ನಾನು ಮತ್ತು ನನ್ನ ಸ್ನೇಹಿತೆ ಬೀದಿಯಲ್ಲಿ ನೆಲಕ್ಕಿಂತ ಸೈಕಲ್ ಮೇಲೇ ಹೆಚ್ಚಾಗಿ ಇರುತ್ತಿದ್ದೆವು. ಎಲ್ಲೆಲ್ಲಿ ಹೋಗಲು ಮನೆಯವರಿಂದ ಅನುಮತಿ ಇದ್ದಿತೋ ಅಲ್ಲೆಲ್ಲಾ ಸೈಕಲ್ ಮೇಲೇ ಸವಾರಿ. ಈಗಲೂ ಅದೇ ರೀತಿ. ಮೊನ್ನೆ ನಾನು ಮತ್ತು ಕೆಕೆ ಸುಮಾರು ೭ಕಿ.ಮೀ ಸೈಕಲ್ ಮೇಲೆ ಒಬ್ಬರು ಸ್ನೇಹಿತರ ಮನೆಗೆ ಹೋಗಿದ್ದೆವು. ನನಗೆ ಗೊತ್ತು ನನ್ನ ಹತ್ತಿರದವರಿಗೆ ಇದು ನಂಬಲಸಾಧ್ಯ ಎಂದು, ಮೊದಲಿಗೆ ನನಗೇ ಆಶ್ಚರ್ಯವಾಯಿತು. ಈಗ ನಾವೂ ಇಲ್ಲಿಯವರ ಹಾಗೆ ಬಿಸಿಲು ಕಂಡ ತಕ್ಷಣ ಸೈಕಲ್ ಮೇಲೆ ಕಣ್ಣು.ಈಗ ನನ್ನ ಯೋಚನೆ ಇಷ್ಟೇ. ಇದು " ಅಗಸ ಹೊಸದರಲ್ಲಿ..." ಎನ್ನುವ ಗಾದೆ ತರಹ ಆಗದಿರಲಿ ಎಂದು.

Wednesday, September 12, 2007

AYURVEDIC PLATTER!!

I became aware of the above platter for the first time when we(me and KK) had been to a German Vegetarian restaurant in Munich. We were very amazed to see this in the menu card and even more amazed to see what the platter contains. It has samosa, chutney, rice with curry, falafal and papad. I didn't find any connection between Ayurveda and the listed items. Actually these are not considered healthy eats. Two days earlier we had been to another vegetarian restaurant, where again the same items under"Ayurvedic Platter". But anyway the name has done the trick and i could see many people having that.
So we can't say what's in a name. In this competitive world, everything is in a NAME.

Friday, September 7, 2007

ಭೋ(ಬೋ)ರ್‌ಗರೆಯುವ ಮಳೆ

ಇಲ್ಲಿ(ಮ್ಯುನಿಕ್,ಜರ್ಮನಿ) ಸುಮಾರು ನಾಲ್ಕೈದು ದಿನದಿಂದ ಒಂದೇ ಸಮನೆ
ಮಳೆ ನಿಜವಾಗಿಯೂ ಬೋರ್‌-ಗರೆಯುತ್ತಿದೆ. ಇಲ್ಲಿ ಸ್ವಲ್ಪ ಹೊತ್ತು ಮಳೆ
ಜೋರಾಗಿ ಸುರಿದರೂ ಸಾಕು ಚಳಿ ಹುಟ್ಟುತ್ತದೆ. ಆದ್ರಿಂದ ಕಿಟಕಿ ತೆಗೆಯುವ
ಪ್ರಶ್ನೆಯೇ ಇಲ್ಲ. ಮೊದಲೇ ಇಲ್ಲಿ ಜನಸಂಚಾರ ಕಡಿಮೆ,ಶಬ್ಧ ಕೇಳೋದು
ಆಗೊಮ್ಮೆ-ಈಗೊಮ್ಮೆ. ಇನ್ನು ಕಿಟಕಿ ಹಚ್ಚಿಬಿಟ್ಟ್ರಂತೂ ನಿಶ್ಶಬ್ಧ, ಮಳೇನ
ನೋಡಬಹುದು ಅಷ್ಟೆ, ಅನುಭವಿಸೋಕ್ಕೆ ಆಗಲ್ಲ.

ಮೈಸೂರಿನಲ್ಲಿ ಮಳೆ ಶುರುವಾಯ್ತು ಅಂದ್ರೆ ಜೊತೆಗೆ ಮಣ್ಣಿನ ವಾಸನೆ.
ಆಚೆ ಕಟ್ಟೆ ಮೆಲೆ ಕೂತ್ಕೊಂಡು ಮಳೇನ ನೋಡೋದೇ ಒಂದು ಮಜಾ.
ಚಿಕ್ಕವರಾಗಿದ್ದಾಗ್ಲಂತೂ ಮಳೇಲಿ ನೆನೆಯಕ್ಕೆ ಕಾರಣ ಹುಡುಕುತಿದ್ವಿ.
ಇದರ ಜೊತೆಗೆ ಅಮ್ಮ ಮಾಡಿದ ಪಕೋಡ ಇದ್ರಂತೂ ಆಹಾ ಸ್ವರ್ಗ.
ಅಥವಾ ಚುರುಮುರಿ,ಬೊಂಡಾ,ವಡೆ ಆದ್ರೂ ಆಯ್ತು.

ಇಲ್ಲಿ ಹೊರಗೆ ಹೋಗ್ಬೇಕು ಅಂದ್ರೆ ಎರಡು,ಮೂರು ಪದರ ಬೆಚ್ಚಗಿರೋ
ಬಟ್ಟೆ ಹಾಕ್ಕೊಂಡು, ತಕ್ಕ ಶೂಸ್ ಹಾಕ್ಕೊಂಡು,ಜೊತೆಗೆ ಚತ್ರಿ
ಹಿಡ್ಕೊಂಡು ಹೊರಡಬೇಕು. ಮ್‍ಮ್.. ಬೋಂಡಾ,ವಡೆ... ಸಿಗುತ್ತೆ
ಅನ್ನೋ ಆಮಿಷ ಇದ್ದಿದ್ರೆ ತಯಾರಾಗಿ ಹೊರಡೋದ್ರಲ್ಲಿ ಹುಮ್ಮಸ್ಸಿರುತಿತ್ತು
ಉಫ್.. ಎಲ್ಲಾ ನಾವೇ ಮಾಡ್ಕೊಂಡು ತಿನ್ಬೇಕು.

ಹಾಗಾಗಿ ಸೂರ್ಯ ಯಾವಗ ನಿದ್ದೆಯಿಂದೆದ್ದು ಹೊರಗೆ ಬರ್ತಾನೋ ಅಂತ
ಕಾಯೋ ಹಂಗಾಗಿದೆ

Tuesday, September 4, 2007

ಕನಸೋ ಇದು ಹುಚ್ಚೋ

ನನ್ನ ಹತ್ತಿರದವರಿಗೆ ಸಾಮಾನ್ಯವಾಗಿ ನನಗೆ ಬೀಳುವ ಹುಚ್ಚು ಕನಸುಗಳ ಬಗ್ಗೆ ತಿಳಿದೇ ಇರುತ್ತದೆ.
ಅದರಲ್ಲೂ ನನಗೆ ತುಂಬ ಪ್ರಿಯವಾದ ಹಾಗೂ ಎಂದೂ ಮರೆಯಲಾಗದ ಎರಡು ಕನಸುಗಳ ಬಗ್ಗೆ ಇಲ್ಲಿ ಬರೆಯಿತ್ತಿದ್ದೇನೆ.

೧. ಒಮ್ಮೆ ಕನಸಿನಲ್ಲಿ ನಮ್ಮಮ್ಮ ಲಾರಿ ಓಡಿಸುತ್ತಿದ್ದ ಹಾಗೆ ಬಿತ್ತು. ನಮ್ಮಮ್ಮ ಎಂದೂ ಯಾವ ಗಾಡಿನೂ ಓಡಿಸಿದವರಲ್ಲ.ಅವರಿಗೆ ಈ ಕನಸಿನ ಬಗ್ಗೆ ಹೇಳಿದಾಗ ಅವರ ಪ್ರತಿಕ್ರಿಯೆ, ಕನಸಲ್ಲಾದ್ರೂ ಒಳ್ಳೆ ಕಾರ್ ಓಡಿಸ್ತಿರೋ ತರಹ ನೀನು ಕಾಣಬಾರದಿತ್ತ ಎಂದು ನನ್ನ ಹಾಸ್ಯ ಮಾಡಿದರು.
೨. ಇನ್ನೊಮ್ಮೆ ನನ್ನ ಕನಸಿನಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರನ್ನು ಭೇಟಿ ಮಾಡಿದ್ದೆ. ಅವರು ನನ್ನ ಬೆನ್ನು ತಟ್ಟಿ, ನಮ್ಮಮ್ಮನ ಬಳಿ ಹೋಗಿ, ನೀವು ತುಂಬಾ ಅದೃಷ್ಟವಂತರು ಇಂಥಾ ಒಳ್ಳೆಯ ಮಗಳನ್ನು ಪಡೆಯಲು ಎಂದು ಹೇಳಿದರು.(ಆಮೇಲೆ ಕನಸು ಅಂತ ಗೊತ್ತಾದ್ರೂ, ಕನಸಲ್ಲಾದ್ರೂ ಇಂಥಾ ಒಳ್ಳೆ ಕಾಂಪ್ಲಿಮೆಂಟ್ ಸಿಕ್ತಲ್ಲ ಅಂಥ ಖುಶಿಯಾಯ್ತು)
ಹೀಗೆ ನೂರಾರು ಚಿತ್ರವಿಚಿತ್ರ ಕನಸುಗಳು ಬಿದ್ದಿವೆ,ಬೀಳುತ್ತಲೇ ಇರುತ್ತವೆ.

ನಾನೆಲ್ಲೋ ಓದಿದ್ದೆ,ಮನುಷ್ಯನಿಗೆ ಬೀಳುವ ಕನಸುಗಳನ್ನು ಅವಲೋಕಿಸಿ,ಅವನ ಸ್ವಭಾವದ ಬಗ್ಗೆ ಅರಿಯಬಹುದು ಅಂಥ. ಆಗ ನಾನು ಯೋಚಿಸಿದೆ,ಸಧ್ಯ ನನ್ನ ಕನಸುಗಳನ್ನು ಯಾರೂ ಅವಲೋಕಿಸಿಲ್ಲ.
ಹಾಗಿದ್ದರೆ ಖಂಡಿತಾ ನನಗೆ ಹುಚ್ಚು ಎಂದೇ ಹೇಳುತ್ತಿದ್ದರು
.

Friday, August 31, 2007

BHARAT MERA DESH HAI!!

Above words doesn't sound unusual coming from an Indian's mouth.But from a German....!!

Yesterday we(myself and KK) had been an institute where they teach German language to foreigners. we were standing in the lounge looking here and there where to go when we heard footsteps. We encountered a lady (may be in her fifties) . After exchanging greetings she asked us, are you from India? The moment we said yes it was really amazing to see the sparkle in her eyes. She was so happy as if she met some angels from heaven. Her love for India is unexplainable. She started telling us about her stay of 3 years in India, teaching handicap children. On Knowing that we are from Karnataka she was even more excited. She has friends in Hubli,Dharwad and just loves Mysore. She is a vegetarian and started relishing idli,masala dosa,upma etc, virtually. She travels to India every year and can speak Marathi. She is a faculty in that institute and had come out of her class to get some information from the reception. Then for some time she forgot her class, talking to us about India.It is not that she expresses her love for India only to Indians, even other students of different natioanalities knows that.(our chinese friend who is a student there,told us). Before going back to her class she said,she wants to settle in India one day and can't live without India . She gave us her contact number on a paper,on top she had written BHARAT MERE DESH HAI in hindi.

I don't think any of us living abroad would feel so excited on seeing a fellow Indian and I feel we can learn a thing or two from this experience.